ಸಾರ್ವಜನಿಕ ಪ್ರಕಟಣೆ ಅನುಸೂಚಿ

 

ಸಾರ್ವಜನಿಕ ಪ್ರಕಟಣೆ ಅನುಸೂಚಿ (PDS) ಕಾಯಿದೆ ಎಂದರೇನು? ಸಾರ್ವಜನಿಕ ಪ್ರಕಟಣೆ ಅನುಸೂಚಿಯು JNNURM ಅಡಿ ಒಂದು ಕಡ್ಡಾಯವಾದ ರಾಜ್ಯ ಮಟ್ಟದ ಸುಧಾರಣೆಗಳಲ್ಲೊಂದು. ಈ ಕಾಯಿದೆಯಡಿ, ನಾಗರೀಕ ಸ್ಥಳೀಯ ಸಂಸ್ಥೆಗಳು (ULB) ತಮ್ಮ ಕಾರ್ಯಾಚರಣೆಗಳ ಬಗ್ಗೆ ಸ್ವಯಂಪ್ರೇರಿತವಾಗಿ ಮಾಹಿತಿಯನ್ನು ಬಹಿರಂಗಪಡಿಸಬೇಕು; ಇವುಗಳೆಂದರೆ, ಕಾರ್ಯಾಚರಣೆ ಮತ್ತು ಹಣಕಾಸಿನ ಪ್ರಮಿತಿಗಳನ್ನೊಳಗೊಂಡ ವಾರ್ಷಿಕ ಸಾಧನೆಯ ನಿರೂಪಣೆಗಳು, ಮತು ವಿವಿಧ ಸೇವೆಗಳಿಗೆ ಸೇವಾಮಟ್ಟಗಳನ್ನು ಕಾಲಿಕವಾಗಿ ಸಾರ್ವಜನಿಕರಿಗೆ ತಿಳಿಸಬೇಕು.
PDS ನ ಅವಶ್ಯಕತೆ ಪುರಸಭಾ ಆಡಳಿತದ ಹಲವು ಅಂಶಗಳಿಗೆ ಸಂಬಂಧಪಟ್ಟ ಮಾಹಿತಿಯ ಪ್ರಕಟಣೆಯ ಮೂಲಕ ಪುರಸಭೆಯ ಕಾರ್ಯಾಚರಣೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರುವುದು ಈ ಸಾರ್ವಜನಿಕ ಪ್ರಕಟಣೆಯ ಉದ್ದೇಶ. ಎಲ್ಲಾ ಪಣಿಧಾರಿಗಳಿಗೆ ತ್ರೈಮಾಸಿಕ ಸಾಧನೆಯ ಮಾಹಿತಿಯು ತಪ್ಪದೆ ತಲುಪಲು ಸಾರ್ವಜನಿಕ ಅನಾವರಣ ಕಾಯಿದೆಯನ್ನು (PDL) ಜಾರಿಗೆ ತರುವುದು JNNURM ನ ದೂರದೃಷ್ಟಿಯಾಗಿದೆ. ಸಾರ್ವಜನಿಕ ಅನಾವರಣ ಕಾಯಿದೆಯ ಪ್ರಮುಖ ಉದ್ದೇಶಗಳೆಂದರೆ:

 

  • ನಾಗರಿಕರಿಗೆ ಮತ್ತು ಪಣಿಧಾರಿಗಳಿಗೆ ವಿವಿಧ ಪುರಸಭಾ ಸೇವೆಗಳ ಬಗ್ಗೆ ಸೂಕ್ತವಾದ ಹಣಕಾಸಿನ ಮತ್ತು ಕಾರ್ಯಾಚರಣೆಯ ಮಾಹಿತಿ ಒದಗಿಸುವುದು.
  • ಪುರಸಭೆಯಿಂದ ಸಾರ್ವಜನಿಕ ಸರಕು ಮತ್ತು ಸೇವೆಗಳ ನೀಡಿಕೆಯಲ್ಲಿ ದಕ್ಷತೆ ಮತ್ತು ಸಮರಸತೆಯನ್ನು ಪ್ರೇರೇಪಿಸುವುದು.
  • ಒಂದು ರಚನೆ, ನಿಯಮ ಮತ್ತು ಮಾನಕವಾದ ವಿಧಾನದಲ್ಲಿ ಮಾಹಿತಿಯ ಪ್ರಕಟಣೆಯ ಮೂಲಕ ಕಾಲಾಂತರದಲ್ಲಿ (ಒಂದು ನಿರ್ದಿಷ್ಟ ULB ಯ) ಮತ್ತು ಸ್ಥಳಾಂತರದಲ್ಲಿ (ULB ಗಳ ನಡುವೆ) ಹೋಲಿಕೆಯನ್ನು ಮಾಡುವುದು.

 

ಕರ್ನಾಟಕದಲ್ಲಿ PDS ನ ಅನುಷ್ಠಾನ ಕರ್ನಾಟಕದಲ್ಲಿ, ಎಲ್ಲಾ ULB ಗಳು ಕರ್ನಾಟಕ ಸ್ಥಳೀಯ ಧನ ಪ್ರಾಧಿಕಾರಗಳ ವಿತ್ತೀಯ ಹೊಣೆಗಾರಿಕೆ ಕಾಯಿದೆ, 2003 ಅಡಿ ವಿತ್ತೀಯ ಪತ್ರಗಳ ಮತ್ತು ಪರಿಶೋಧಿತ ಪತ್ರಗಳ ಪ್ರಕಟಣೆ ಮಾಡುತ್ತಿವೆ. ಈ ಕಾಯಿದೆಯಡಿ, ಪ್ರತಿ ULB ಯು ತನ್ನ ವಾರ್ಷಿಕ ಬಜೆಟ್, ವಾರ್ಷಿಕ ಲೆಕ್ಕಪುಸ್ತಕಗಳು ಮತ್ತು ವಾರ್ಷಿಕ ವರದಿ ಮತ್ತು ಪ್ರಮಾಣೀಕೃತ ವಾರ್ಷಿಕ ಲೆಕ್ಕಪುಸ್ತಕಗಳನ್ನು ಪ್ರಕಟಿಸಬೇಕು. ಆದರೆ, ಸೇವಾ ಮಟ್ಟಗಳ ಬಗ್ಗೆ ಮಾಹಿತಿಯು ಇದರ ಭಾಗವಾಗಿಲ್ಲ. ಸೇವಾ ಮಟ್ಟದ ಸೂಚಕಗಳ ಬಗ್ಗೆ ಮಾಹಿತಿಯ ಪ್ರಕಟಣೆಯ ವಿಷಯದಲ್ಲಿ, ಹೊಸ ಕಾಯಿದೆಯನ್ನು ತರುವ ಬದಲಿಗೆ, ಮಾಹಿತಿ ಹಕ್ಕು ಕಾಯಿದೆಯ (RTI) ನಿಯಮಗಳನ್ನು ಈಗ ಪರಿಶೀಲಿಸಲಾಗುತ್ತಿದೆ. ಸೇವಾ ಮಟ್ಟದ ಸೂಚಕಗಳು/ಪ್ರಮಿತಿಗಳು ಮತ್ತು ದತ್ತಾಂಶಗಳ ಸಾರ್ವಜನಿಕ ಪ್ರಕಟಣೆಗೆ ಖಖಿI ಕಾಯಿದೆಯಡಿ ರಾಜ್ಯ ಸರ್ಕಾರವು ಒಂದು ಅಧಿಸೂಚನೆಯನ್ನು ಹೊರಡಿಸಿದೆ (ಸಂ. UDD 92 CSS 2009 ದಿನಾಂಕ 26.11.2009). ULB ಗಳು ಮತ್ತು ಪುರಸಭೆಯ ಸೇವೆಗಳನ್ನು ಒದಗಿಸುವ ಎಲ್ಲಾ ಸಂಸ್ಥೆಗಳು ಖಖಿIನಲ್ಲಿ ವ್ಯಾಖ್ಯಾನಿಸಲಾದ ಸಾರ್ವಜನಿಕ ಪ್ರಾಧಿಕಾರದ ವರ್ಗಕ್ಕೆ ಬರುತ್ತವೆ.

 

 

ULB ಗಳ ಪಾತ್ರ ಅಧಿಸೂಚನೆಯು ಹೇಳುವಂತೆ ULB ಗಳು ಮತ್ತು ಇತರ ಸಂಸ್ಥೆಗಳು ಕೆಳಕಂಡ ವಿಧಾನದಲ್ಲಿ ಸೇವಾ ಮಟ್ಟಗಳ ಬಗ್ಗೆ ಸ್ವಯಂಪ್ರೇರಿತವಾಗಿ ಮಾಹಿತಿಯನ್ನು ಪ್ರಕಟಿಸತಕ್ಕದ್ದು – ಎ. ಹೆಚ್ಚು ಮಾಹಿತಿಯನ್ನು ಪಡೆಯಲು ಸಹಾಯಕವಾಗುವಂತೆ ಕಛೇರಿಯ ವಿಳಾಸ, ಜಾಲತಾಣ ಮತ್ತು/ಅಥವಾ ಇ-ಮೇಲ್ ಮತ್ತು ಇತರ ಸಂಪರ್ಕ ವಿವರಗಳೊಂದಿಗೆ, ಜಿಲ್ಲೆಯಲ್ಲಿ ಪ್ರಚಾರವಾಗುವ ಕನಿಷ್ಟ ಒಂದು ದಿನಪತ್ರಿಕೆಯಲ್ಲಿ ಮಾಹಿತಿಯ ಸಾರಾಂಶವನ್ನು ಪ್ರಕಟಿಸಬೇಕು; ಬಿ. ಸ್ಥಳೀಯ ಪ್ರಾಧಿಕಾರದ ಜಾಲತಾಣದ ಬಗ್ಗೆ ಎಲ್ಲಾ ಮಾಹಿತಿಯ ಪೂರ್ಣ ಪ್ರಕಟಣೆ; ಸಿ. ಸ್ಥಳೀಯ ಪ್ರಾಧಿಕಾರದ ಸೂಚನಾ ಫಲಕ; ಡಿ. ವಾರ್ಡ್ ಕಛೇರಿಗಳಿದ್ದಲ್ಲಿ, ಅದರ ಸೂಚನಾ ಫಲಕ; ಅಧಿಸೂಚನೆಯ ಅನುಸೂಚಿಯು ULB ಗಳು ಪ್ರಕಟಿಸಬೇಕಾದ ಮಾಹಿತಿಯ ವಿವರಗಳು, ಪ್ರಕಟಣೆಯ ಆವರ್ತನ (ಅರ್ಧ ವಾರ್ಷಿಕ, ವಾರ್ಷಿಕ ಇತ್ಯಾದಿ), ಪ್ರಕಟಣೆಯ ಮಟ್ಟ (ವಾರ್ಡ್, ನಗರ) ಮತ್ತು ಯಾವ ಅವಧಿಗೆ ಮಾಹಿತಿಯನ್ನು ಪ್ರಕಟಿಸಬೇಕು (ಒಂದು ವರ್ಷ ಇತ್ಯಾದಿ) ಎಂಬುದರ ವಿವರಗಳನ್ನು ನೀಡುತ್ತದೆ.